ದೇಶದ 2ನೇ ಅತಿ ಸುದೀರ್ಘ ಪ್ರಧಾನಿ : ಇಂದಿರಾ ಮೀರಿಸಿದ ಮೋದಿ! ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಶುಕ್ರವಾರ 4,078 ದಿನಗಳು ಪೂರ್ಣಗೊಳ್ಳುತ್ತಿದ್ದು, 4,077 ದಿನಗಳ ಕಾಲ ಸೇವೆ ಸಲ್ಲಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದಾಖಲೆಯನ್ನು ಮುರಿಯಲಿದ್ದಾರೆ.
1966ರ ಜ.24ರಿಂದ 1977ರ ಮಾ.24ರವರೆಗೆ ಇಂದಿರಾ ಗಾಂಧಿ ನಿರಂತರವಾಗಿ ಪ್ರಧಾನಿ ಹುದ್ದೆಯಲ್ಲಿದ್ದರು. ಅತಿ ದೀರ್ಘಕಾಲ ಸೇವೆ ಸಲ್ಲಿಸಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಆ ಹೆಗ್ಗಳಿಕೆ ಮೋದಿಯವರ ಪಾಲಾಗಲಿದೆ.
ಈ ಹಿಂದೆ ಸತತ 3 ಬಾರಿ ಪ್ರಧಾನಿಯಾಗಿ ಆಯ್ಕೆಯಾದ ನೆಹರೂ ಅವರ ಇತಿಹಾಸವನ್ನೂ ಮೋದಿ ಮುರಿದಿದ್ದರು. ಸ್ವಾತಂತ್ರ್ಯಾನಂತರ ಜನಿಸಿದ ಮೊದಲ ಪ್ರಧಾನಿ, 2 ಪೂರ್ಣ ಅವಧಿಗಳನ್ನು ಪೂರೈಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ
ಭಾರತದ ಎಲ್ಲಾ ಪ್ರಧಾನಿಗಳು ಮತ್ತು ಮುಖ್ಯಮಂತ್ರಿಗಳಲ್ಲಿ, ಪಕ್ಷದ ನಾಯಕರಾಗಿ ಸತತ 6 ಚುನಾವಣೆಗಳನ್ನು ಗೆದ್ದ ಏಕೈಕ ನಾಯಕ ಎಂಬ ದಾಖಲೆಗಳನ್ನೂ ಮೋದಿಯವರು ಬರೆದಿದ್ದಾರೆ.