ಲಾಡ್ಜ್ ನಲ್ಲಿ ಡೆತ್ ನೋಟ್ ಬರೆದಿಟ್ಟು ದಾವಣಗೆರೆ `PSI’ ನಾಗರಾಜು ಆತ್ಮಹತ್ಯೆ.!

ಲಾಡ್ಜ್ ನಲ್ಲಿ ಡೆತ್ ನೋಟ್ ಬರೆದಿಟ್ಟು ದಾವಣಗೆರೆ `PSI’ ನಾಗರಾಜು ಆತ್ಮಹತ್ಯೆ.!

ತುಮಕೂರು : ತುಮಕೂರಿನ ಲಾಡ್ಜ್ ವೊಂದರಲ್ಲಿ ದಾವಣಗೆರೆಯ ಪಿಎಸ್ ಐ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ದಾವಣಗೆರೆ ಬಡಾವಣೆಯ ಠಾಣೆಯ ಪಿಎಸ್ ಐ ತುಮಕೂರಿನ ದ್ವಾರಕ ಹೋಟೆಲ್ ಲಾಡ್ಜ್ ನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

35 ವರ್ಷದ ನಾಗರಾಜು ಆತ್ಮಹತ್ಯೆಗೆ ಶರಣಾದ ಪಿಎಸ್ ಐ ಆಗಿದ್ದು, ಜುಲೈ 1 ರಂದು ದ್ವಾರಕ ಹೋಟೆಲ್ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದರು. ಇಂದು ಲಾಡ್ಜ್ ನಲ್ಲಿ ದುರ್ವಾಸನೆ ಬಂದಿದ್ದು, ಸಿಬ್ಬಂದಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *