ಬೆಂಗಳೂರು: ನಟ ದರ್ಶನ್ ಡೆವಿಲ್ ಶೂಟಿಂಗ್ ಗೋಸ್ಕರ ಥೈಲ್ಯಾಂಡ್ ಗೆ ಹೋಗಿದ್ರು. ಶೂಟಿಂಗ್ ಮುಗಿದ ಬಳಿಕ ಇಂದು ಬೆಂಗಳೂರಿಗೆ ಬಂದಿಳಿದಿದ್ದಾರೆ.
ಈ ವಿಡಿಯೋಗಳು ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿವೆ. ಏರ್ಪೋರ್ಟ್ ನಲ್ಲಿದರ್ಶನ್ ಗಾಗಿ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು.ಈ ವಿಚಾರ ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ದರ್ಶನ್ ಈಗಾಗಲೇ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ವಿಚಾರಣೆಯನ್ನ ಎದುರಿಸುತ್ತಿದ್ದಾರೆ. ಹೀಗಿರುವಾಗ ಅವರಿಗೆ ಟೈಟ್ ಸೆಕ್ಯೂರಿಟಿ ಕೊಟ್ಟಿದ್ಯಾಕೆ ಎಂಬ ಪ್ರಶ್ನೆಗಳು ಎದುರಾಗಿವೆ.
ಈ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನನಗೆ ಈ ಬಗ್ಗೆ ಗೊತ್ತಿಲ್ಲ. ಅವರು ಭದ್ರತೆ ಕೊಟ್ಟಿದ್ದಾರಾ ಅತವಾ ಬೇರೆ ರೀತಿ ಮಾಡಿದ್ದಾರಾ ಎಂಬುದು ಗೊತ್ತಿಲ್ಲ.
ಅದನ್ನ ವಿಚಾರ ಮಾಡ್ತೀನಿ ಎಂದಿದ್ದಾರೆ. ದೇವನಹಳ್ಳಿ ಏರ್ಪೋರ್ಟ್ ಗೆ ಪತ್ನಿ ಜೊತೆಗೆ ಬಂದಿಳಿದ ನಟ ದರ್ಶನ್ ಗೆ ಅಲ್ಲಿನ ಸಿಬ್ಬಂದಿಗಳು ಭದ್ರತೆಯನ್ನ ಒದಗಿಸಿದ್ದಾರೆ.
ನಾಲ್ಕು ಕಡೆಯಿಂದಾನೂ ದರ್ಶನ್ ಅವರಿಗೆ ಸೆಕ್ಯುರಿಟಿ ಕೊಟ್ಟು, ಹೊರಗೆ ಕರೆದುಕೊಂಡು ಬಂದಿದ್ದಾರೆ.
ಹೊರಗಡೆ ಆದ್ರೆ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ.
ಅನಾಹುತ ನಡೆಯಬಾರದು ಎಂಬ ಕಾರಣಕ್ಕೆ ಸೆಕ್ಯುರಿಟಿ ಕೊಡುವುದರಲ್ಲಿ ಅರ್ಥವಿದೆ. ಆದರೆ ಏರ್ಪೋರ್ಟ್ ನಂಥ ಜಾಗದಲ್ಲಿ ವಿವಿಐಪಿ ಟ್ರೀಟ್ಮೆಂಟ್ ಕೊಟ್ಟಿದ್ಯಾಕೆ ಎಂದು ಪ್ರಶ್ನೆಗಳು ಕೇಳಿ ಬರ್ತಿವೆ.
ಸದ್ಯಕ್ಕೆ ದರ್ಶನ್ ಹಾಗೂ ಅವರ ತಂಡದ ವಿಚಾರಣೆ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಇದೆ. ವಾದ – ಪ್ರತಿವಾದವನ್ನ ಈಗಾಗಲೇ ಕೋರ್ಟ್ ಆಲಿಸಿದೆ. ಇನ್ನೇನಿದ್ದರು ತೀರ್ಪು ನೀಡುವುದೊಂದೆ ಬಾಕಿ. ಮುಂದಿನ ವಾರ ತೀರ್ಪನ್ನ ಕಾಯ್ದಿರಿಸಲಾಗಿದೆ.