ಥೈಲ್ಯಾಂಡ್ ಮತ್ತು ಕಾಂಬೋಡಿಯಾಕ್ಕೆ ಟ್ರಂಪ್ ಎಚ್ಚರಿಕೆ! ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಗಡಿ ಸಂಘರ್ಷಕ್ಕೆ ಮಧ್ಯಸ್ಥಿಕೆ ವಹಿಸಿರುವ ಡೊನಾಲ್ಡ್ ಟ್ರಂಪ್, ಯುದ್ಧ ನಿಲ್ಲಿಸದಿದ್ದರೆ ವ್ಯಾಪಾರ ಒಪ್ಪಂದಗಳನ್ನು ಕೈಬಿಡುವುದಾಗಿ ಎಚ್ಚರಿಸಿದ್ದಾರೆ.
ಶಾಂತಿ ಮಾತುಕತೆಗೆ ಒಲವು ತೋರಿದ ಎರಡೂ ದೇಶಗಳ ನಾಯಕರೊಂದಿಗೆ ಟ್ರಂಪ್ ಮಾತುಕತೆ ನಡೆಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಗಡಿ ಸಂಘರ್ಷಕ್ಕೆ ಮಧ್ಯಸ್ಥಿಕೆ ವಹಿಸಿದ್ದು, ತಕ್ಷಣವೇ ಯುದ್ಧವನ್ನು ನಿಲ್ಲಿಸದಿದ್ದರೆ ಎರಡೂ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಕೈಬಿಡುವುದಾಗಿ ಕಟ್ಟುನಿಟ್ಟಾಗಿ ಎಚ್ಚರಿಸಿದ್ದಾರೆ.
ಜುಲೈ 26, 2025ರಂದು ಟ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಥೈಲ್ಯಾಂಡ್ನ ಹಂಗಾಮಿ ಪ್ರಧಾನಿಯೊಂದಿಗೆ ಒಳ್ಳೆಯ ಸಂಭಾಷಣೆ ನಡೆಸಿದ್ದಾಗಿ, ಶಾಂತಿ ಮತ್ತು ಕದನ ವಿರಾಮಕ್ಕೆ ಎರಡೂ ದೇಶಗಳು ಒಲವು ತೋರಿವೆ ಎಂದು ಹೇಳಿದ್ದಾರೆ.
ಥೈಲ್ಯಾಂಡ್ ಮತ್ತು ಕಾಂಬೋಡಿಯಾದೊಂದಿಗೆ ಮಾತುಕತೆ ನಡೆಸಿದ್ದೇನೆ. ಯುದ್ಧವನ್ನು ಕೊನೆಗೊಳಿಸಿ ಶಾಂತಿಯನ್ನು ಸ್ಥಾಪಿಸದಿದ್ದರೆ, ಅಮೆರಿಕ ಈ ದೇಶಗಳೊಂದಿಗೆ ಯಾವುದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ, ಎಂದು ಟ್ರಂಪ್ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ.
ಭಾರತ-ಪಾಕ್ ಯುದ್ಧ ಹೋಲಿಕೆ ಮಾಡಿದ ಟ್ರಂಪ್:
ಕಾಂಬೋಡಿಯಾದ ಪ್ರಧಾನಿಯೊಂದಿಗಿನ ಮಾತುಕತೆ ಪೂರ್ಣಗೊಂಡಿದ್ದು, ಥೈಲ್ಯಾಂಡ್ನ ಪ್ರತಿಕ್ರಿಯೆಯನ್ನು ಅವಲಂಬಿಸಿ ಮತ್ತೆ ಚರ್ಚೆ ನಡೆಸುವ ಸಾಧ್ಯತೆಯಿದೆ ಎಂದವರು ತಿಳಿಸಿದ್ದಾರೆ.
ಟ್ರಂಪ್ ಈ ಸಂಘರ್ಷವನ್ನು ಭಾರತ-ಪಾಕಿಸ್ತಾನದ ಯುದ್ಧಕ್ಕೆ ಹೋಲಿಕೆ ಮಾಡಿದ್ದು, ‘ಈ ಯುದ್ಧ ಭಾರತ-ಪಾಕ್ ಸಂಘರ್ಷವನ್ನು ನೆನಪಿಸುತ್ತದೆ, ಅದನ್ನು ಯಶಸ್ವಿಯಾಗಿ ನಿಲ್ಲಿಸಲಾಯಿತು.
ಇಲ್ಲಿ ಸಹ ಶಾಂತಿಯನ್ನು ಸ್ಥಾಪಿಸಬಹುದು,” ಎಂದು ಹೇಳಿದ್ದಾರೆ. ಈ ಬೆದರಿಕೆಯಿಂದ ಎರಡೂ ದೇಶಗಳು ಶಾಂತಿ ಮಾತುಕತೆಗೆ ಒಲವು ತೋರುವ ಸಾಧ್ಯತೆಯಿದೆ. ಮುಂದಿನ ಬೆಳವಣಿಗೆಗಳಿಗಾಗಿ ಕಾಯುತ್ತೇವೆ ಎಂದಿದ್ದಾರೆ.