ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಇದೀಗ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ್ದು, 2025ರ ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಆರು ತಂಡಗಳು ಪಾಲ್ಗೊಂಡಿರುವ ಟೂರ್ನಿಯಲ್ಲಿ, ಡಿವಿಲಿಯರ್ಸ್ ತಮ್ಮ ನೆಚ್ಚಿನ ಜಗತ್ತಿನ ಬಲಿಷ್ಠ ಕ್ರಿಕೆಟ್ ಆಟಗಾರರನ್ನೊಳಗೊಂಡ ತಂಡವನ್ನು ಅಯ್ಕೆ ಮಾಡಿದ್ದಾರೆ.
ಎಬಿ ಡಿವಿಲಿಯರ್ಸ್ ಆಯ್ಕೆ ಮಾಡಿದ ತಂಡದಲ್ಲಿ ಕೇವಲ ಇಬ್ಬರು ಭಾರತೀಯ ಆಟಗಾರರಿಗೆ ಮಾತ್ರ ಸ್ಥಾನ ನೀಡಿದ್ದು, ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್, ರೋಹಿತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಅವರನ್ನು ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.
ಎಬಿ ಡಿವಿಲಿಯರ್ಸ್ ಆಯ್ಕೆ ಮಾಡಿದ ಬಲಿಷ್ಠ ತಂಡದ ಆರಂಭಿಕರನ್ನಾಗಿ ಮಾಜಿ ಕ್ಯಾಪ್ಟನ್ ಗ್ರೇಮ್ ಸ್ಮಿತ್ ಹಾಗೂ ಆಸೀಸ್ ದಿಗ್ಗಜ ಆರಂಭಿಕ ಮ್ಯಾಥ್ಯೂ ಹೇಡನ್ಗೆ ಸ್ಥಾನ ನೀಡಿದ್ದಾರೆ.
ಇನ್ನು ಮೂರನೇ ಕ್ರಮಾಂಕದಲ್ಲಿ ಆಸೀಸ್ ದಿಗ್ಗಜ ನಾಯಕ ರಿಕಿ ಪಾಂಟಿಂಗ್ಗೆ ಮಣೆ ಹಾಕಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾಗಿ ತಮ್ಮ ಆತ್ಮೀಯ ಗೆಳೆಯ
ಭಾರತದ ರನ್ ಮಷೀನ್ ವಿರಾಟ್ ಕೊಹ್ಲಿ, ಆಸೀಸ್ನ ಸ್ಟೀವ್ ಸ್ಮಿತ್ ಹಾಗೂ ಕಿವೀಸ್ ಮಾಜಿ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಅವರನ್ನು ಆಯ್ಕೆ ಮಾಡಿದ್ದಾರೆ.
ಇನ್ನು ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೆ, ಎಬಿ ಡಿವಿಲಿಯರ್ಸ್ ತಮ್ಮ ಕನಸಿನ ಬಲಿಷ್ಠ ತಂಡದಲ್ಲಿ ಯಾವುದೇ ಆಲ್ರೌಂಡರ್ಗೆ ಸ್ಥಾನ ನೀಡಿಲ್ಲ.
ಭಾರತದ ಸೂಪರ್ ಸ್ಟಾರ್ ಆಟಗಾರರಾಗಿರುವ ಸಚಿನ್ ತೆಂಡುಲ್ಕರ್, ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ ಹಾಗೂ ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರಿಗೆ ಸ್ಥಾನ ನೀಡದೇ ಇರುವುದು ಕುತೂಹಲ ಮೂಡಿಸಿದೆ.
ಅದೇ ರೀತಿ ಎಬಿಡಿ ತಮ್ಮ ಕನಸಿನ ತಂಡದಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ನ ಯಾವೊಬ್ಬ ಆಟಗಾರರನಿಗೂ ಸ್ಥಾನ ನೀಡಿಲ್ಲ ಎನ್ನುವುದು ಅಚ್ಚರಿಯೆನಿಸಿದ್ರೂ ಸತ್ಯ.
ಎಬಿ ಡಿವಿಲಿಯರ್ಸ್ ಆಯ್ಕೆ ಮಾಡಿದ ವಿಶ್ವದ ಬಲಿಷ್ಠ ತಂಡ ಹೀಗಿದೆ ನೋಡಿ:
ಗ್ರೇಮ್ ಸ್ಮಿತ್, ಮ್ಯಾಥ್ಯೂ ಹೇಡನ್, ರಿಕಿ ಪಾಂಟಿಂಗ್, ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್, ಎಂ ಎಸ್ ಧೋನಿ, ಮಿಚೆಲ್ ಜಾನ್ಸನ್, ಮೊಹಮ್ಮದ್ ಆಸಿಫ್, ಮುತ್ತಯ್ಯ ಮುರುಳೀಧರನ್, ಶೇನ್ ವಾರ್ನ್.