
ಬೆಂಗಳೂರು: ಗ್ರೇಟರ್ ಬೆಂಗಳೂರು 5 ನಗರ ಪಾಲಿಕೆಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಬೆಂಗಳೂರು ಉತ್ತರ ನಗರ ಪಾಲಿಕೆ, ಬೆಂಗಳೂರು ಪೂರ್ವ ನಗರ ಪಾಲಿಕೆ ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆ ಎಂದು ರಾಜ್ಯ ಸರ್ಕಾರ ವಿಂಗಡಣೆ ಮಾಡಿದೆ.
ಆರಂಭದಲ್ಲಿ 3 ನಗರ ಪಾಲಿಕೆಗಳ ಸ್ಥಾಪನೆ ಬಗ್ಗೆ ಸುಳಿವು ನೀಡಿದ್ದ ಸರ್ಕಾರ ಇದೀಗ 5 ನಗರ ಪಾಲಿಕೆಗಳ ಸ್ಥಾಪನೆಗೆ ಅಧಿಕೃತ ಮುದ್ರೆ ಹಾಕಿದೆ.
ಇನ್ಮುಂದೆ ಗ್ರೇಟರ್ ಬೆಂಗಳೂರು ಐದು ವಿಭಾಗಗಳಾಗಿ ವಿಂಗಡಣೆ ಆಗಿದ್ದು 5 ನಗರ ಪಾಲಿಕೆ ಮಾಡಿ ಸರ್ಕಾರದಿಂದ ಅಸ್ತು ಎಂದಿದೆ. ಈ 5 ನಗರ ಪಾಲಿಕೆಗಳ ಗಡಿ ಗುರುತು ಮಾಡಿ ಆದೇಶಿಸಿದೆ. ಬಿಬಿಎಂಪಿ ಕೇಂದ್ರ ಕಚೇರಿ ಇನ್ನು ಮುಂದೆ ಜಿಬಿಎ ಕೇಂದ್ರ ಕಚೇರಿಯಾಗಿ ಮಾರ್ಪಾಡು ಆಗಲಿದೆ.
ಆಗಸ್ಟ್ 10ರ ಒಳಗೆ ಬಿಬಿಎಂಪಿ ಕಣ್ಮರೆಯಾಗಿ ಜಿಬಿಎ ಎನ್ನುವ ಹೆಸರಲ್ಲಿ ಅಸ್ಥಿತ್ವದಲ್ಲಿ ಇರಲಿದೆ. ಆಗಸ್ಟ್ 11ರಿಂದ ಮಳೆಗಾಲದ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ 5 ನಗರ ಪಾಲಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ. ಅಧಿವೇಶನದಲ್ಲಿ ಬಿಲ್ ಪಾಸ್ ಮಾಡಲು ಈಗಾಗಲೇ ತಯಾರಿ ನಡೆದಿದೆ.
- ಬೆಂಗಳೂರು ದಕ್ಷಿಣ ನಗರ ಪಾಲಿಕೆ
- ಬೆಂಗಳೂರು ಉತ್ತರ ನಗರ ಪಾಲಿಕೆ
- ಬೆಂಗಳೂರು ಪಶ್ಚಿಮ ನಗರ ಪಾಲಿಕೆ
- ಬೆಂಗಳೂರು ಪೂರ್ವ ನಗರ ಪಾಲಿಕೆ
- ಬೆಂಗಳೂರು ಕೇಂದ್ರ ನಗರ ಪಾಲಿಕೆ