
ಭಾರೀ ರಾಜಕೀಯ ಕೆಸರೆರಚಾಟಗಳ ಮಧ್ಯೆ ಶುರುವಾದ ಜಾತಿ ಗಣತಿ ಸಮೀಕ್ಷೆ ಶುರುವಾದಾಗಲೇ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದೆ. ಸಮೀಕ್ಷೆಯನ್ನ ಬೇಕಾಬಿಟ್ಟಿ ನಡೆಸಲಾಗ್ತಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಆದ್ರೆ ಇದಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮದೇ ದಾಟಿಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.
ಜಾತಿ ಗಣತಿ ಸಮೀಕ್ಷೆಯಲ್ಲಿ ಕಳ್ಳಾಟ ನಡೆಸುತ್ತಿರುವ ಆರೋಪ
ಬೇಕು-ಬೇಡಗಳ ಮಧ್ಯೆ ಶುರುವಾದ ಜಾತಿ ಗಣತಿ ಸದ್ಯ ವಿವಾದದ ಕೇಂದ್ರಬಿಂದುವಾಗಿದೆ. ಯಾಕಂದ್ರೆ ಅವೈಜ್ಞಾನಿಕವಾಗಿದೆ ಅಂತ ಕಾಂಗ್ರೆಸ್ ಸರ್ಕಾರ ಮತ್ತೆ ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳ ಸಮೀಕ್ಷೆಗೆ ನಡೆಸುತ್ತಿದೆ. ಆದರೆ ಈ ಸಮೀಕ್ಷೆಯಾದರೂ ನೆಟ್ಟಗೆ ನಡೆಯುತ್ತಿದೆಯಾ ಇಲ್ಲ ಅಂತಿವೆ ಕೆಲವೊಂದು ದೃಶ್ಯಗಳು.. ಸಮೀಕ್ಷೆ ನಡೆಸುತ್ತಿರುವ ಸಿಬ್ಬಂದಿ ಹಾಗೂ ಸರ್ಕಾರಿ ಅಧಿಕಾರಿಗಳು ಸರಿಯಾಗಿ ಮಾಹಿತಿ ಪಡೆಯದೇ ಕಾಟಾಚಾರಕ್ಕಾಗಿ ಸಮೀಕ್ಷೆ ಮಾಡಿ ಮನೆ ಮನೆಗೆ ಸ್ಟಿಕ್ಕರ್ ಅಂಟಿಸಿ ಕೈತೊಳೆಯುತ್ತಿದ್ದಾರೆಂಬ ದೂರು ಕೇಳಿಬಂದಿವೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲೂ ಒಳ ಮೀಸಲಾತಿ ಸರ್ವೆ ಬಗ್ಗೆ ಚರ್ಚೆ ನಡೆಸಲಾಗಿದೆ. ಕಾಟಾಚಾರಕ್ಕೆ ಒಳ ಮೀಸಲಾತಿ ಸರ್ವೆ ಮಾಡಲಾಗ್ತಿದೆ ಅಂತ ದೂರು ಕೇಳಿಬಂದಿದೆ. ಕ್ಯಾಬಿನೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮುಂದೆ ಸಚಿವ ಹೆಚ್.ಸಿ ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಹೆಚ್.ಎನ್ ನಾಗಮೋಹನ್ ದಾಸ್ರನ್ನ ಕರೆಸಿ ಸಮೀಕ್ಷೆ ಯಾವ ಹಂತದಲ್ಲಿದೆ, ಏನಾಗಿದೆ ಎಂದು ವಿಚಾರಿಸುತ್ತೇನೆ ಅಂತ ಸಿಎಂ ಭರವಸೆ ನೀಡಿದ್ದಾರೆ.
ಒಟ್ಟಾರೆ ಜಾತಿ ಗಣತಿ ಸಮೀಕ್ಷೆಯನ್ನ ಬೇಕಾಬಿಟ್ಟಿ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ರೂ ಹಳ್ಳಿ ಜನರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸೋವಷ್ಟು ಅವರಿಗೆ ಮಾಹಿತಿ ಇದೆಯಾ ಅನ್ನೋದನ್ನ ಮರೆತಿರುವಂತಿದೆ.