
ಏರೋಸ್ಪೇಸ್ ಸಂಸ್ಥೆಗಳಿಗೆ ಆಂಧ್ರ ಸಿಎಂ ಪುತ್ರ ಹಾಗೂ ಸಚಿವರಾಗಿರುವ ನಾರಾ ಲೋಕೇಶ್ ಬಹಿರಂಗ ಆಫರ್ ನೀಡಿದ್ದರು. ಅವರ ಆಹ್ವಾನಕ್ಕೆ ಸಚಿವ ಎಂಬಿ ಪಾಟೀಲ್ ಖಡಕ್ ತಿರುಗೇಟು ನೀಡಿದ್ದಾರೆ.
ಏರೋಸ್ಪೇಸ್ ಯೋಜನೆಗಾಗಿ ಸರ್ಕಾರ ದೇವನಹಳ್ಳಿಯ ಜಮೀನು ಭೂಸ್ವಾಧೀನಕ್ಕೆ ಮುಂದಾಗಿತ್ತು. ಆದ್ರೆ, ರೈತರ ನಿರಂತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಭೂಸ್ವಾಧೀನ ಕೈಬಿಟ್ಟಿದೆ.
ಇದೀಗ, ಏರೋಸ್ಪೇಸ್ ಸಂಸ್ಥೆಗಳಿಗೆ ಆಂಧ್ರ ಸಿಎಂ ಪುತ್ರ ಹಾಗೂ ಸಚಿವರಾಗಿರುವ ನಾರಾ ಲೋಕೇಶ್ಬ ಹಿರಂಗ ಆಫರ್ ನೀಡಿದ್ದು, ತಮ್ಮ ರಾಜ್ಯಕ್ಕೆ ಬಂದು ಹೂಡಿಕೆ ಮಾಡುವಂತೆ ಆಹ್ವಾನ ನೀಡಿದ್ದರು. ಈ ಆಹ್ವಾನದ ವಿರುದ್ಧ ಸಚಿವ ಎಂಬಿ ಪಾಟೀಲ್ ಕಿಡಿಕಾರಿದ್ದಾರೆ.
ಭಾರತದ ನಂ. 1 ಏರೋಸ್ಪೇಸ್ ನಾವು ಹೊಂದಿದ್ದೇವೆ!
ಎಕ್ಸ್ ಮೂಲಕ ಪೋಸ್ಟ್ ಹಂಚಿಕೊಂಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್, ಏರೋಸ್ಪೇಸ್ ಉದ್ಯಮಿಗಳಿಗೆ ಕರ್ನಾಟಕದ ಬದಲು ಆಂದ್ರಕ್ಕೆ ಆಹ್ವಾನಿಸಿದ್ದ ಸಚಿವ ನಾರಾ ಲೋಕೇಶ್ ಅವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ಕರ್ನಾಟಕವು ಕೇವಲ ಭೂಮಿಯನ್ನಷ್ಟೇ ನೀಡುವುದಿಲ್ಲ. ಭಾರತದ ನಂ. 1 ಏರೋಸ್ಪೇಸ್ ಮತ್ತು ರಕ್ಷಣಾ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತದೆ. ದಶಕಗಳಿಂದ ನಾವು ದೇಶದ ಅತ್ಯುತ್ತಮ ಏರೋಸ್ಪೇಸ್ ತಂತ್ರಜ್ಞಾನವನ್ನು ನಿರ್ಮಿಸಿದ್ದೇವೆ ಎಂದಿದ್ದಾರೆ.