ಉಡುಪಿ ಶ್ರೀಕೃಷ್ಣ ಮಠಕ್ಕೆ ಡಿಕೆಶಿ ಭೇಟಿ – ನಾಡಿನ ಒಳಿತಿಗಾಗಿ ಪ್ರಾರ್ಥನೆ! ಜಿಲ್ಲಾ ಪ್ರವಾಸದಲ್ಲಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರಿಂದು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ (Udupi Shri Krishna Matha) ಭೇಟಿ ನೀಡಿ, ಶ್ರೀಕೃಷ್ಣನ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠದ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಗಳು ಪ್ರಸಾದ ನೀಡಿ ಆಶೀರ್ವದಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ (DK Shivakumar), ಕೃಷ್ಣ, ಗಣಪತಿ ಆಶೀರ್ವಾದದ ಜೊತೆಗೆ ನಿಮ್ಮ ಮಾಧ್ಯಮದವರ ಆಶೀರ್ವಾದವೂ ಬೇಕು ಅಂತ ಹಾಸ್ಯ ಚಟಾಕಿ ಹಾರಿಸಿದರು. ಮುಂದುವರಿದು… ಕೃಷ್ಣಮಠದಿಂದ ಈ ಹಿಂದೆಯೇ ಆಹ್ವಾನ ಇತ್ತು.
ಬಹಳ ವರ್ಷದಿಂದ ಈ ಸರ್ಕಾರ ಬಂದ್ಮೇಲೆ ಆಹ್ವಾನ ಮಾಡುತ್ತಿದ್ದರು. ಕೃಷ್ಣಮಠಕ್ಕೆ ಬರಲು ಸಾಧ್ಯವಾಗಿರಲಿಲ್ಲ ಇಂದು ಬಂದಿದ್ದೇನೆ ಎಂದರು.
ಇನ್ನೂ ಧರ್ಮಸ್ಥಳದಲ್ಲಿ ಜೆಡಿಎಸ್, ಬಿಜೆಪಿ (BJP – JDS) ಸಮಾವೇಶ ವಿಚಾರ ಕುರಿತು ಮಾತನಾಡಿ, ಜೆಡಿಎಸ್ ಬಿಜೆಪಿಗೆ ಬೇರೆ ವೃತ್ತಿ ಇಲ್ಲ.
ಎರಡೂ ಪಕ್ಷಗಳು ಬದುಕಿನ ಬಗ್ಗೆ ನೋಡಲ್ಲ. ಭಾವನೆ ಮೇಲೆ ಧರ್ಮದ ಮೇಲೆ ರಾಜಕಾರಣ ಮಾಡುತ್ತಾರೆ ಎಂದು ನುಡಿದರು.
ಬಿಹಾರ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಪ್ರಚಾರ ಕುರಿತು ಮಾತನಾಡಿ, ಅದು ಸುಮ್ಮನೆ ಚರ್ಚೆ ನಡೆಯುತ್ತಿದೆ. ನಾನು ಬಿಹಾರ ಹೋಗಿದ್ದೀನಿ ನಾನು ಬಂದಿದ್ದೇನೆ.
ಅವರು ಸಚಿವರ ಜೊತೆ ಹೋಗಿದ್ದಾರೆ, ನಾನು ಶಾಸಕರ ಜೊತೆ ಹೋಗಿದ್ದೇನೆ. ಕಾರ್ಯಕರ್ತರು, ಎಂಎಲ್ಎ, ಸಚಿವರು ಎಲ್ಲ ಒಂದೇ. ಎಲ್ಲರೂ ಪಕ್ಷದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.