ಉಗ್ರರ ಟಾರ್ಗೆಟ್ ಆಗಿತ್ತು ಧರ್ಮಸ್ಥಳ! ಮಂಗಳೂರು ಕುಕ್ಕರ್ ಬ್ಲಾಸ್ಟ್ ಕ್ರಿಮಿಗಳ ಬೆನ್ನುಬಿದ್ದ ಇ.ಡಿ ಅಧಿಕಾರಿಗಳು ಭಯಾನಕ ಸತ್ಯವೊಂದನ್ನ ಬಯಲಿಗೆಳೆದಿದ್ದಾರೆ.
ಧರ್ಮಸ್ಥಳವೇ ಕುಕ್ಕರ್ ಕಿರಾತಕರ ಟಾರ್ಗೆಟ್ ಆಗಿತ್ತು ಅನ್ನೋ ವರದಿಯನ್ನ ಇ.ಡಿ ಬಿಚ್ಚಿಟ್ಟಿದೆ. ಕ್ರಿಮಿಗಳ ಕೃತ್ಯಕ್ಕೆ ಕ್ರಿಪ್ಟೊ ಕರೆನ್ಸಿ ಮೂಲಕ ಹಣ ಸಂದಾಯ ಆಗಿತ್ತು ಅನ್ನೋದು ದೇಶವನ್ನೇ ಬೆಚ್ಚಿಬೀಳಿಸಿದೆ.
2022ರ ನವೆಂಬರ್ 19ರಂದು ಮಂಗಳೂರಿನ ಹೊರವಲಯದ ಕಂಕನಾಡಿಯಲ್ಲಿ ಬ್ಲಾಸ್ಟ್ ಆಗಿದ್ದ ಈ ಆಟೋ ಕೇವಲ ರಾಜ್ಯ ಮಾತ್ರವಲ್ಲ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.
ಆಟೋದಲ್ಲಿ ಸ್ಫೋ*ಟಗೊಂಡಿದ್ದ ಕುಕ್ಕರ್ ಬಾಂ*ಬ್ ಕರಾಳ ಸತ್ಯವೊಂದನ್ನ ಬಿಚ್ಚಿಟ್ಟಿತ್ತು.
ಈ ಕುಕ್ಕರ್ ಬಾಂ*ಬ್ ಕ್ರಿಮಿ ಶಾರೀಕ್ನ ಜಾಡು ಹಿಡಿದು ಹೊರಟ ಇ.ಡಿ ತಂಡದ ಮುಂದೆ ಭಯಾನಕ ಸತ್ಯವೊಂದು ಬಯಲಾಗಿದೆ.
ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಕೇಸಲ್ಲಿ ಸ್ಫೋಟಕ ಸತ್ಯ ಬಯಲು:
ಆಟೋದಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿ ಪೊಲೀಸರ ಕೈಗೆ ಲಾಕ್ ಆದ ಉಗ್ರ ಮಹಮ್ಮದ್ ಶಾರೀಕ್ ಮತ್ತೊಂದು ಮುಖವಾಡ ಬಯಲಾಗಿದೆ.
ಈ ಶಾರಿಕ್ ಧರ್ಮಸ್ಥಳ ಮಂಜುನಾಥ ದೇಗುಲದ ಬಳಿ ಬ್ಲಾಸ್ಟ್ ಮಾಡಲು ಸ್ಕೆಚ್ ಹಾಕಿದ್ನಂತೆ. ಆದ್ರೆ ಗುರುವಿಗೆ ತಿರುಮಂತ್ರ ಅನ್ನೋ ಹಾಗೆ ಆ ಬ್ಲಾಸ್ಟ್ ಪ್ಲಾನ್ ಫೇಲ್ ಆಗಿ ಕುಕ್ಕರ್ ಮಂಗಳೂರಿನಲ್ಲೇ ಬ್ಲಾಸ್ಟ್ ಆಗಿತ್ತು.
ಧರ್ಮಸ್ಥಳದಲ್ಲಿ ಸ್ಫೋ*ಟಕ್ಕೆ ಸ್ಕೆಚ್!
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲದ ಬಳಿ ಸ್ಫೋಟಕ್ಕೆ ಉಗ್ರ ಮಹಮ್ಮದ್ ಶಾರೀಕ್ ಸಂಚು ರೂಪಿಸಿದ್ದ.. ಶಾರಿಕ್ ಮೂಲಕ ಆಟೋದಲ್ಲಿ ಕುಕ್ಕರ್ ಬಾಂಬ್ ಇಟ್ಟು ಐಸಿಸ್ ಉಗ್ರರು ಬ್ಲಾಸ್ಟ್ ಮಾಡಲು ಪ್ಲಾನ್ ಮಾಡಿದ್ರು.
ಆದ್ರೆ ಉಗ್ರರ ಟೈಮರ್ ಯಡವಟ್ಟಿನಿಂದ ಮಾರ್ಗಮಧ್ಯೆ ಆಟೋದಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿತ್ತು.. 90 ನಿಮಿಷಗಳ ಬದಲಿಗೆ 9 ನಿಮಿಷಗಳಿಗೆ ಕುಕ್ಕರ್ ಬಾಂ*ಬ್ ಸ್ಫೋಟಗೊಂಡು ಶಾರಿಕ್ ಗಂಭೀರವಾಗಿ ಗಾಯಗೊಂಡಿದ್ದ.