ಅಮ್ಮನ ಹೆಸರಿನಲ್ಲಿ ಸುದೀಪ್ ಹಸಿರು ಕ್ರಾಂತಿ! ಇಂದು ತಮ್ಮ ತಾಯಿಯ ಹುಟ್ಟು ಹಬ್ಬವನ್ನ ವಿಶೇಷವಾಗಿ ಆಚರಿಸಿದ್ದಾರೆ. ಇತ್ತೀಚೆಗಷ್ಟೇ ಅಗಲಿರುವ ಅಮ್ಮನ ನೆನಪು ಸದಾ ಉಳಿಯಲೆಂದು ಅವರು ಹಸಿರು ಕ್ರಾಂತಿಗೆ ಮುಂದಾಗಿದ್ದಾರೆ.
ಅಮ್ಮನ ಹುಟ್ಟು ಹಬ್ಬದ ದಿನದಂದು ಕುಟುಂಬ ಸಮೇತ ಮರ ಬೆಳೆಸುವ ಸಂಕಲ್ಪ ಹೊತ್ತಿದ್ದಾರೆ.
ಪ್ರತಿ ಮರಕ್ಕೂ ಒಂದು ಕಥೆ ಇದೆ. ಈ ಮರವು ನನ್ನ ಅಮ್ಮನ ಕಥೆ ಹೇಳಲಿ ಎಂದು ಭಾವುಕರಾಗಿ ಬರೆದುಕೊಂಡಿರುವ ಸುದೀಪ್, ಅಮ್ಮನ ಹುಟ್ಟು ಹಬ್ಬಕ್ಕೆ ಮರ ನೆಟ್ಟು ಭಾವುಕರಾಗಿದ್ದಾರೆ.
ಇದೇ ಸೆಪ್ಟಂಬರ್ 2ಕ್ಕೆ ಸುದೀಪ್ ಕೂಡ ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದು, ಅದು ಅಮ್ಮನು ಇಲ್ಲದ ಮೊದಲ ಹುಟ್ಟು ಹಬ್ಬ ಎಂದು ನುಡಿದಿದ್ದಾರೆ.

ಅಮ್ಮನ ಹೆಜ್ಜೆಗೆ ಹಸಿರು ಹೆಜ್ಜೆ ಅಭಿಯಾನದಡಿ ಸುದೀಪ್ ಗಿಡ ನೆಟ್ಟಿದ್ದು, ಈ ಅಭಿಯಾನ ನಿರಂತರವಾಗಿ ಇರಲಿದೆಯಂತೆ.
ಈ ಅಭಿಯಾನಕ್ಕೆ ಸುದೀಪ್ ಸಹೋದರಿ ಮತ್ತು ಪತ್ನಿ ಕೂಡ ಸಾಥ್ ನೀಡಿದ್ದಾರೆ. ಎಲ್ಲರ ಅಮ್ಮನ ಹೆಸರಿನಲ್ಲಿ ಗಿಡ ನೆಟ್ಟು, ಅಮ್ಮನ ನೆನಪನ್ನು ಸದಾ ಹಸಿರಾಗಿ ಇರುವಂತೆ ನೋಡಿಕೊಂಡಿದ್ದಾರೆ.