ಅಭಿಮಾನಿ ಕೈ ಮೇಲೆ ಅರಳಿದ ಪವಿತ್ರ ಗೌಡ.. ಟ್ಯಾಟೂ! ಅಭಿಮಾನಿಯೊಬ್ಬ ತನ್ನ ಬಲಗೈನ್ನ ಗುಟ್ಟಾಗಿ ಬಿಳಿ ಬಣ್ಣದ ಕಾಗದದಿಂದ ಸುತ್ತಿಕೊಂಡು ನಗು ಬೀರುತ್ತ ಪವಿತ್ರ ಗೌಡ ಇದ್ದಲ್ಲಿಗೆ ಬರುತ್ತಾನೆ.
ಪವಿತ್ರ ಗೌಡರ ಬಳಿ ಕೂರುತ್ತಿದ್ದಂತೆಯೇ, ‘ಕೈಯಲ್ಲಿ ಏನು’ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಆತ, ‘ನೋಡಿ.. ನಿಮ್ಗೆ ಗೊತ್ತಾಗುತ್ತೆ ’ ಎಂದಿದ್ದಾನೆ.
ಆಗ ಇಬ್ಬರು ನಗುತ್ತಾರೆ. ನಂತರ ಪವಿತ್ರ ಗೌಡ, ಕೈಯಲ್ಲಿ ಏನಿದೆ ಎಂದು ಪೇಪರ್ ತೆಗೆದು ನೋಡ್ತಾರೆ. ನೋಡ್ತಿದ್ದಂತೆಯೇ.. ಪವಿತ್ರ ಗೌಡ ಜೋರಾಗಿ ನಗ್ತಾರೆ.
ಆಗ ಆತ, ‘ಚೆನ್ನಾಗಿದ್ಯಾ ಅಕ್ಕಾ’ ಎಂದು ಕೇಳ್ತಾರೆ. ಅದಕ್ಕೆ ಉತ್ತರಿಸುವ ಪವಿತ್ರ ಗೌಡ.. ಆತನ ಭುಜಕ್ಕೆ ಹೊಡೆದಯ ‘ಸಖತ್ ಆಗಿದೆ’ ಎಂದು ನಕ್ಕಿದ್ದಾರೆ.
ನಂತರ ಖುಷಿಯಿಂದ ತಲೆ ಕೈಯಿಂದ ಚಚ್ಚಿಕೊಳ್ಳುವ ಪವಿತ್ರ ಗೌಡ, ಮತ್ತೆ ಜೋರಾಗಿ ನಕ್ಕಿದ್ದಾರೆ. ಆಗ ಮತ್ತೆ ‘ಚೆನ್ನಾಗಿದ್ಯಾ ಅಕ್ಕಾ’ ಎಂದು ಕೇಳ್ತಾನೆ.
ಅದಕ್ಕೆ ನಗುವ ಪವಿತ್ರ ಗೌಡ, ‘ಏನು ಹೇಳಲಿ ನಾನು?, ಏನೋ ಇಲ್ಲಿ ಮಾತಾಡಬೇಕು ತಾನೇ’ ಎಂದು ಪ್ರಶ್ನಿಸಿದ್ದಾರೆ.
ಪವಿತ್ರ ಗೌಡ ಭಾವಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿರುವ ಅಭಿಮಾನಿ, ಅದರ ಕೆಳಗೆ ‘ಅಕ್ಕಾ’ ಎಂದು ಇಂಗ್ಲಿಷನ್ನಲ್ಲಿ ಬರೆಸಿಕೊಂಡಿದ್ದಾನೆ.