Dharmasthala Case: ಕ್ಷೇತ್ರದ ಪಾವಿತ್ರತೆಗೆ ದಕ್ಕೆ ತರುವ ಕೆಲಸ ನಡೆಯುತ್ತಿದೆ, ಆದ್ರೆ ಭಯಪಡುವ ಅಗತ್ಯವಿಲ್ಲ ! ಬಿಜೆಪಿ ಸಮಾವೇಶದಲ್ಲಿ ವೀರೇಂದ್ರ ಹೆಗ್ಗಡೆ ಸಂದೇಶ ಧರ್ಮಸ್ಥಳ: ತಲೆಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ (SIT Investigation) ತನಿಖೆ ಚುರುಕುಗೊಂಡಿದೆ.
ಬುರುಡೆ ಹಿಡಿದುಕೊಂಡು ಕಥೆ ಕಟ್ಟಿದ್ದ ಅನಾಮಿಕ ದೂರುದಾರ ಚಿನ್ನಯ್ಯನನ್ನೇ (Chinnaiah) ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ನಡುವೆ ಇಂದು ಬಿಜೆಪಿ (BJP) ವತಿಯಿಂದ ಧರ್ಮಸ್ಥಳ ಚಲೋ ಸಮಾವೇಶ ನಡೆದಿದೆ. ಈ ಸಮಾವೇಶದಲ್ಲಿ ಬಿಜೆಪಿಯ ಘಟಾನುಘಟಿ ನಾಯಕರುಗಳು ಅಬ್ಬರಿಸಿದ್ದಾರೆ.
ಇನ್ನೂ ಧರ್ಮಸ್ಥಳದ ಧರ್ಮಾಧಿಕಾರಿಯಾಗಿರುವ ವೀರೇಂದ್ರ ಹೆಗ್ಗಡೆಯವರು (Veerendra Hegde) ಕೂಡ ಸಮಾವೇಶಕ್ಕೆ ಸಂದೇಶವೊಂದನ್ನು ರವಾನಿಸಿದ್ದಾರೆ.
ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವ ಕೆಲಸ ಆಗ್ತಾ ಇದೆ
ಬಿಜೆಪಿ ಸಮಾವೇಶಕ್ಕೆ ಸಂಬಂಧಿಸಿದಂತೆ ಸಂದೇಶ ರವಾನಿಸಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು, ಇಂದು ನೆರೆದಿರುವ ಎಲ್ಲಾ ನಾಯಕರುಗಳಿಗೆ, ಕಾರ್ಯಕರ್ತರಿಗೆ ನನ್ನ ಅಭಿನಂದನೆಗಳು.
ಎಸ್ಐಟಿ ತನಿಖೆ ಆಗ್ತಾ ಇರೋ ಹಿನ್ನಲೆ ಹೆಚ್ಚು ಮಾತನಾಡಲ್ಲ, ಹಲವು ದಿನಗಳಿಂದ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವ ಕೆಲಸ ಆಗ್ತಾ ಇದೆ. ಇದರಿಂದಾಗಿ ನಾನು ನೊಂದಿದ್ದೇನೆ ಎಂದು ಸಂದೇಶ ರವಾನಿಸಿದ್ದಾರೆ.
ಎಸ್ಐಟಿ ಮೇಲೆ ನಂಬಿಕೆ ಇದೆ ಸತ್ಯ ಹೊರಗೆ ಬರುತ್ತೆ
ನಾವು ಸತ್ಯದ ಕಡೆ ನಡೆಯುವವರು, ನಮಗೆ ಭಯ ಇಲ್ಲ. ಎಸ್ಐಟಿ ಮೇಲೆ ನಂಬಿಕೆ ಇದೆ ಸತ್ಯ ಹೊರಗೆ ಬರುತ್ತೆ. ನೀವೆಲ್ಲಾ ಕ್ಷೇತ್ರದ ಪರ ನಿಂತಿರೋದು ತುಂಬಾ ಖುಷಿ ಕೊಟ್ಟಿದೆ.
ನೀವೆ ಈ ಕ್ಷೇತ್ರದ ಸಂಪತ್ತು, ನೀವೆಲ್ಲರೂ ಈ ಕ್ಷೇತ್ರದ ಮೇಲಿನ ಅಭಿಮಾನದಿಂದ ಬಂದಿದ್ದೀರಾ. ನಿಮಗೆ ಮಂಜುನಾಥಸ್ವಾಮಿ, ಅಣ್ಣಪ್ಪಸ್ವಾಮಿ ಒಳ್ಳೆಯದು ಮಾಡಲಿ ಎಂದು ವಿರೇಂದ್ರ ಹೆಗ್ಗಡೆಯವರು ಸಂದೇಶ ರವಾನಿಸಿದ್ದಾರೆ.