ಇಂದಿನಿಂದ ಎಲ್ಪಿಜಿ ಸಿಲಿಂಡರ್ ಮತ್ತಷ್ಟು ಅಗ್ಗ! 19 ಕೆಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿ 33.50 ರೂ.ಗಳಷ್ಟು ಇಳಿಕೆ.
ದೆಹಲಿಯಲ್ಲಿ ಹೊಸ ಬೆಲೆ 1631.50 ರೂ. ದೇಶೀಯ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಒಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ. 25ರಷ್ಟು ತೆರಿಗೆ ಹೇರಿದ ಭಾರದಲ್ಲಿರುವ ನಡುವೆ, ರಷ್ಯಾದಿಂದ ಭಾರತದ ತೈಲ ಆಮದು ಕೂಡ ನಿಂತುಹೋಗುವ ಲಕ್ಷಣಗಳು ಕಾಣುತ್ತಿವೆ.
ಇದರ ನಡುವೆ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಗಳನ್ನು ಪರಿಷ್ಕರಣೆ ಮಾಡಿದೆ.
19 ಕೆಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ದರವನ್ನು ನಾಳೆಯಿಂದ ಅಂದರೆ ಆಗಸ್ಟ್ 1 ರಿಂದ ಜಾರಿಗೆ ಬರುವಂತೆ 33.50 ರೂ.ಗಳಷ್ಟು ಕಡಿಮೆ ಮಾಡಲಾಗಿದೆ.
ದೆಹಲಿಯಲ್ಲಿ, 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಚಿಲ್ಲರೆ ಮಾರಾಟ ಬೆಲೆ ಆಗಸ್ಟ್ 1 ರಿಂದ 1631.50 ರೂ.ಗಳಾಗಿರುತ್ತದೆ. 14.2 ಕೆಜಿ ದೇಶೀಯ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಜುಲೈ 1 ರಂದು ಬೆಲೆ ಪರಿಷ್ಕರಣೆ ಮಾಡಿದ್ದಾಗ, ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು 58.50 ರೂಪಾಯಿಯಷ್ಟು ಇಳಿಕೆ ಮಾಡಲಾಗಿತ್ತು.
ಅದರೊಂದಿಗೆ ಕಳೆದ ಏಪ್ರಿಲ್ನಿಂದ ವಾಣಿಜ್ಯ ಸಿಲಿಂಡರ್ಗಳ ಬೆಲೆಯಲ್ಲಿ ಇಲ್ಲಿಯವರೆಗೂ 176 ರೂಪಾಯಿ ಅಗ್ಗವಾದಂತಾಗಿದೆ.
ಏಪ್ರಿಲ್ 1 ರಂದು ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1836.50 ರೂಪಾಯಿ ಆಗಿದ್ದರೆ, ಆಗಸ್ಟ್ 1 ರ ವೇಳೆಗೆ ಇದರ ಬೆಲೆ 1704.50 ರೂಪಾಯಿ ಆಗಿರಲಿದೆ.
ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿನ ಕಡಿತವು ವ್ಯವಹಾರಗಳ ಮೇಲೆ, ವಿಶೇಷವಾಗಿ ಆಹಾರ ಸೇವೆ ಮತ್ತು ಆತಿಥ್ಯ ಉದ್ಯಮಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ.
ನಿರ್ವಹಣಾ ವೆಚ್ಚದಲ್ಲಿನ ಕಡಿತದೊಂದಿಗೆ, ವ್ಯವಹಾರಗಳು ತಮ್ಮ ಲಾಭದ ಅಂತರವನ್ನು ಹೆಚ್ಚಿಸಲು ಅಥವಾ ಉಳಿತಾಯವನ್ನು ಗ್ರಾಹಕರಿಗೆ ವರ್ಗಾಯಿಸಲು ಸಾಧ್ಯವಾಗುತ್ತದೆ.
ಈ ನಡುವೆ, 14.2 ಕೆಜಿ ಗೃಹಬಳಕೆ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಬದಲಾಗದೆ ಉಳಿದಿದೆ.
ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿನ ಕಡಿತವು ಹೋಟೆಲ್ ಮತ್ತು ರೆಸ್ಟೋರೆಂಟ್ ಮಾರುಕಟ್ಟೆಗೆ ಪರಿಹಾರವಾಗಿದೆ.
ಆದರೆ, ಗೃಹಬಳಕೆಗಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬದಲಾಗದ ಬೆಲೆಯು ಕುಟುಂಬದ ಬಜೆಟ್ಗೆ ಒಂದು ಸವಾಲಾಗಿದೆ.
ಹೆಚ್ಚುತ್ತಿರುವ ಸರಕುಗಳ ಬೆಲೆಗಳ ನಡುವೆ ಅಡುಗೆ ಅನಿಲ ಸಿಲಿಂಡರ್ಗಳ ಬೆಲೆ ಕಡಿಮೆಯಿದ್ದರೆ, ಅದು ಗ್ರಾಹಕರಿಗೆ ಪರಿಹಾರವಾಗುತ್ತಿತ್ತು.
ಕಳೆದ ಮೂರು ತಿಂಗಳಿನಿಂದ ಗೃಹಬಳಕೆ ಸಿಲಿಂಡರ್ಗಳ ಬೆಲೆಗಳು ಬದಲಾಗದೆ ಉಳಿದಿವೆ. ಕೊನೆಯ ಹೊಂದಾಣಿಕೆ ಮಾಡಿದ ಈ ವರ್ಷದ ಏಪ್ರಿಲ್ 8 ರಿಂದ ಗೃಹಬಳಕೆ ಸಿಲಿಂಡರ್ಗಳ ಬೆಲೆಗಳು ಬದಲಾಗದೆ ಉಳಿದಿವೆ.