
ಅಕ್ರಮ ಆಸ್ತಿ ಪತ್ತೆ ಆರೋಪ ಪ್ರಕರಣಕ್ಕೆ (Case) ಸಂಬಂಧಿಸಿ ಕಾರವಾರದ ಕಾಂಗ್ರೆಸ್ (Congress) ಶಾಸಕ ಸತೀಶ್ ಸೈಲ್ (Satish Sail) ಅವರನ್ನು ಇ.ಡಿ. (ED) ಅಧಿಕಾರಿಗಳು ಬಂಧಿಸಿದ್ದಾರೆ.
ಕಳೆದ ಆಗಸ್ಟ್ 14 ರಂದು ಶಾಸಕರ ಮನೆ, ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಆ ಸಂದರ್ಭದಲ್ಲಿ ರೂ.1.68 ಕೋಟಿ ನಗದು, 6.75 ಕೆಜಿ ಚಿನ್ನದ ಬಿಸ್ಕತ್, ಆಭರಣಗಳು ಸೇರಿ ಬ್ಯಾಂಕ್ ಖಾತೆಗಳಲ್ಲಿ ರೂ.14.13 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿತ್ತು.
ಕಾರವಾರ, ಮುಂಬೈ, ದೆಹಲಿ, ಗೋವಾದಲ್ಲಿ ಇ.ಡಿ. ಅಧಿಕಾರಿಗಳಿಂದ ರೇಡ್ ಮಾಡಲಾಗಿತ್ತು. ದಾಳಿ ವೇಳೆ ಅಕ್ರಮ ಆಸ್ತಿ ಪತ್ತೆ ಆರೋಪ ಹಿನ್ನೆಲೆಯಲ್ಲಿ ಸೈಲ್ ಅವರನ್ನು ಇಡಿ ಬಂಧಿಸಿದೆ.